ಚಿತ್ರ: ಹೊಸ ಬೆಳಕು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಂಗ ರಾವ್ ಎಲ್. ಎಂ.
ಗಾಯನ: ಡಾ|ರಾಜ್ ಕುಮಾರ್

ಚೆಲುವೆಯೆ ನಿನ್ನ ನೋಡಲು
ಮಾತುಗಳು ಬರೆದವನು
ಬರೆಯುತ ಹೊಸ ಕವಿತೆಯ..
ಹಾಡುವ ನೋಡಿ ಅಂದವನು |೨|
ಚೆಲುವೆಯೆ ನಿನ್ನ ನೋಡಲು..

ನೀ ನಗುತಿರೆ.. ಹೂವು ಅರಳುವುದು
ನೀ ನಡೆದರೆ.. ಲತೆಯು ಬಳುಕುವುದು

ಪನಿಸರಿಸನಿ ಮಪನಿಸನಿದ
ದಪಗಾಮಪ..
ಗಮಪಸ.. ಗಮಪಸ.. ಗಮಪಸ..

ನೀ ನಗುತಿರೆ.. ಹೂವು ಅರಳುವುದು
ನೀ ನಡೆದರೆ.. ಲತೆಯು ಬಳುಕುವುದು
ಪ್ರೇಮ ಗೀತೆ ಹಾಡಿದಾಗ.. |೨|
ಕೋಗಿಲೆ ಕೂಡ ನಾಚುವುದು

ಚೆಲುವೆಯೆ ನಿನ್ನ ನೋಡಲು
ಮಾತುಗಳು ಬರೆದವನು
ಬರೆಯುತ ಹೊಸ ಕವಿತೆಯ..
ಹಾಡುವ ನೋಡಿ ಅಂದವನು
ಚೆಲುವೆಯೆ ನಿನ್ನ ನೋಡಲು..

ಈ ಸಂತಸ.. ಎಂದು ಹೀಗೆ ಇರಲಿ
ಈ ಸಂಭ್ರ್‍ಅಮ.. ಸುಖವ ತುಂಬುತ ಬರಲಿ

ಪನಿಸರಿಸನಿ ಮಪನಿಸನಿದ
ದಪಗಾಮಪ..
ಗಮಪಸ.. ಗಮಪಸ.. ಗಮಪಸ..

ಈ ಸಂತಸ.. ಎಂದು ಹೀಗೆ ಇರಲಿ
ಈ ಸಂಭ್ರ್‍ಅಮ.. ಸುಖವ ತುಂಬುತ ಬರಲಿ
ಇಂದು ಬಂದ ಹೊಸ ವಸಂತ |೨| 
ಕನಸುಗಳ ನನ್ನ ಸಾಗಿಸಲಿ

ಚೆಲುವೆಯೆ ನಿನ್ನ ನೋಡಲು
ಮಾತುಗಳು ಬರೆದವನು
ಬರೆಯುತ ಹೊಸ ಕವಿತೆಯ..
ಹಾಡುವ ನೋಡಿ ಅಂದವನು
ಚೆಲುವೆಯೆ ನಿನ್ನ ನೋಡಲು!

Category: ಕನ್ನಡ ಚಿತ್ರಸಾಹಿತ್ಯ
Category: ಹೊಸ ಬೆಳಕು ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
Category:Kannada